
ಪ್ರತಿ ಶುಕ್ರವಾರ ರಾತ್ರಿ ೧೦ ಗಂಟೆಗೆ ಫಾಕ್ಸ್ ಹಿಸ್ಟರಿ ಚಾನೆಲ್ ಚಾಲನೆಗೊಳಿಸಿ. ನೈಜ, ವಾಸ್ತವವಾದಿ ಚಿತ್ರಗಳ ನಿರ್ದೇಶ ಅನುರಾಗ್ ಕಶ್ಯಪ್ ಈ ಚಾನೆಲ್‌ನಲ್ಲಿ ಸಿನಿಮಾ ಕುರಿತಾದ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಉತ್ತಮ ಚಿತ್ರಗಳು, ವಿಭಿನ್ನ ಚಿತ್ರಗಳು, ಕಲಾತ್ಮಕ ಚಿತ್ರಗಳು, ಕಮರ್ಶಿಯಲ್ ಚಿತ್ರಗಳು, ಪ್ರಸಿದ್ಧ ಸಿನಿಮಾಗಳು, ಮನತಟ್ಟಿದ ದೃಶ್ಯಗಳು ಹೀಗೆ ಸಿನಿಮಾ ಕುರಿತಾದ ತಮ್ಮ ನೆಚ್ಚಿನ ಕತೆ, ಕಲಾವಿದರು ಹಾಗೂ ಜನರ ಮೆಚ್ಚುಗೆ ಪಡೆದ ಸಿನಿಮಾಗಳ ಬಗ್ಗೆ ಅನುರಾಗ್ ಮಾತು ಹಂಚಿಕೊಳ್ಳಲಿದ್ದಾರೆ. ಜಾಗತಿಕ ಸಿನಿಮಾ ಬಗ್ಗೆ ಮಾಹಿತಿ ಪಡೆಯಲು ಈ ಕಾರ್ಯಕ್ರಮ ಕುತೂಹಲದ ಕಿಟಕಿ. ಒಬ್ಬ ಖ್ಯಾತ ನಿರ್ದೇಶಕನ ಮೂಲಕ ಸಿನಿಮಾ ಬಗ್ಗೆ ತಿಳಿದುಕೊಳ್ಳುವುದೂ ಕೂತುಹಲಕಾರಿ ಅಲ್ಲವೇ ?.