ಗುಡ್ ಮಾರ್ನಿಂಗ್ ವಿಯೆಟ್ನಾಮ್ ಚಿತ್ರ ವಿಭಿನ್ನ ಅನುಭವ ನೀಡುತ್ತದೆ. ಸೈನಿಕನೊಬ್ಬನ ತಳಮಳ ಆತಂಕ ಪ್ರೀತಿಯನ್ನು ಯಥಾವತ್ತಾಗಿ ಚಿತ್ರಿಸುತ್ತದೆ. ಇದೊಂದು ನೆನ್ನಪಿನಲ್ಲುಳಿಯುವ ಅನುಭವವಾಗುತ್ತದೆ, ವಿಎತ್ನಮ್ನಲ್ಲಿರುವ ಅಮೆರಿಕದ ಸೈನಿಕರ ನಿರ್ಭಂದದ ಜೀವನದ ಚಿತ್ರಣ ಇಲ್ಲಿದೆ, ಒಮ್ಮೆ ನೋಡಿ ಅನುಭವಿಸಿ.
ಖ್ಯಾತ ನಟ, ನಿರ್ದೇಶಕ ಕಮಲ ಹಾಸನ್ ಹೊಸ ಸಾಹಸಗಳಿಗೆ ಹೆಸರುವಾಸಿ. ಅವರು ನಿರ್ದೇಶಿಸಿದ, ನಿರ್ಮಿಸಿದ ಅಥವಾ ನಟಿಸಿದ ಚಿತ್ರಗಳಲ್ಲಿ ಹೊಸದೇನಾದರೂ ಇದ್ದೇ ಇರುತ್ತದೆ. ಅಭಯ್, ದಶಾವತಾರಂ, ಇಂಡಿಯನ್ ಇಂತಹ ಸಾಹಸಗಳಿಗೆ ಉದಾಹರಣೆ. ಟಿವಿ ಚಾನೆಲ್ಗಳಲ್ಲಿ ಬಳಸುವ ಜೆ-೧೧ ಕೆಮೆರಾ ಬಳಸಿ ಚಿತ್ರವೊಂದನ್ನು ನಿರ್ಮಿಸುತ್ತೇನೆ ಎಂದು ಸವಾಲ್ ಹಾಕಿದ್ದರಂತೆ ಕಮಲ್. ಈ ಸಾಹಸಕ್ಕಾಗಿ ಅವರು ಆಯ್ದುಕೊಂಡಿದ್ದು ಮುಂಬೈ ಎಕ್ಸ್ಪ್ರೆಸ್ ಚಿತ್ರ. ಜೆ-೧೧ ಕೆಮೆರಾ ಮೂಲಕ ಇಡೀ ಚಿತ್ರ ಹಿಡಿದಿಟ್ಟ ಅವರು ನಂತರ ಡಿಜಿಟಲ್ ತಂತ್ರಜ್ಞಾನವನ್ನು ಫಿಲ್ಮ್ ತಂತ್ರಜ್ಞಾನಕ್ಕೆ ಬದಲಾಯಿಸಿದರು. ಈ ಪ್ರಯತ್ನ ಭಾರಿ ಯಶಸ್ಸು ನೀಡಲಿಲ್ಲವಾದರೂ ಇದು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಂತೂ ಸತ್ಯ.
ನಾನು ಎಸ್ಸೆಸ್ಸೆಲ್ಸಿ ಫೇಲ್ ಆಗಿ ಹರಸಾಹಸ ಪಟ್ಟು ಬಿಕಾಂ, ಜರ್ನಲಿಸ್ಂ ಡಿಪ್ಲೋಮಾ ಮಾಡಿ ಪತ್ರಿಕೋದ್ಯಮದ ಪಾಲಾದೆ. ಕಳೆದ ೯ ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದೇನೆ, ೭ ವರ್ಷಗಳಿಂದ ವಿಜಯ ಕರ್ನಾಟಕದ ಬಾಗಲಕೋಟ ಅವೃತ್ತಿಯಲ್ಲಿ ಉಪಸಂಪಾದಕ, ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಸದ್ಯ ಹಿರಿಯ ವರದಿಗಾರ. ಸಿನಿಮಾ ಅಂದರೆ ನನಗೆ ಊಟ, ನಿದ್ದೆಯಷ್ಟೇ ಪ್ರೀತಿ
1 comment:
ಇಷ್ಟೇ ಯಾಕೆ ಬರೆದುಬಿಟ್ಟಿದ್ದು..ಕುತೂಹಲ ಹುಟ್ಟಿಸಾಕ? ಇವತ್ತೇ ನಿಮ್ ಬ್ಲಾಗ್ ನೋಡಿದ್ದು...ಇನ್ನಷ್ಟು ಬರೆಯಿರಿ..ಬರಹಗಳ ಸುಧೆ ನಿರಂತರವಾಗಿ ಹರಿಯಲಿ. ಶುಭಹಾರೈಕೆ
-ಚಿತ್ರಾ(ಶರಧಿ)
Post a Comment