ಕೊಳಕು ಭಾರತ, ನಾರುವ ಸ್ಲಂ, ಭಿಕ್ಷೆ ಬೇಡುವ ಮಕ್ಕಳು ಪಾಶ್ಚಾತ್ಯ ಸಿನಿಮಾ ನಿರ್ದೇಶಕರ ಕಣ್ಣಲ್ಲಿ ಭಾರತ ಕಾಣುವುದು ಹೀಗೆ. ಅಲ್ಲೇನಿದ್ದರೂ ವಿದೇಶದಲ್ಲಿ ಕುಳಿತ ಪ್ರೇಕ್ಷಕರು, ವಿಮರ್ಶಕರು ಭಾರತದ ಕೊಳಚೆ ಗುಂಡಿ ನೋಡಿ ಪಾಪ ಅನ್ನಬೇಕು, ಇದು ಸಾಕ್ಷಾತ್ ಭಾರತದ ದರ್ಶನ ಎಂದುಕೊಂಡು ಪ್ರಶಸ್ತಿ ಕೊಡಬೇಕು. ನಮ್ಮವರು ಐವತ್ತು ವರ್ಷಕ್ಕೊಮ್ಮೆ ದೊರಕುವ ಪ್ರಶಸ್ತಿ ನೋಡಿ ಖುಷಿ ಪಡೆಬೇಕು, ಭಾರತೀಯ ಚಿತ್ರರಂಗ ಅದ್ಭುತ ಎಂದು ಉದ್ಗರಿಸಬೇಕು.
ಇಸ್ಮಾಯಿಲ್ ಮರ್ಚಂಟ್ ಇಂಗ್ಲೀಷ್‌ನಲ್ಲಿ ಹಲವಾರು ಚಿತ್ರ ನಿರ್ಮಿಸಿದ್ದಾರೆ, ಅವರು ಭಾರತೀಯ ಮೂಲದವರು. ನಮ್ಮವರೆ ಆದ ನಾಸಿರುದ್ದೀನ್ ಶಾ, ಶಬಾನಾ ಆಜ್ಮಿ, ಶಶಿ ಕಪೂರ, ಐಶ್ವರ್ಯಾ ರೈ ಕೂಡ ಹಲವು ಇಂಗ್ಲೀಷ್ ಚಿತ್ರಗಳಲ್ಲಿ ನಟಿಸಿದ್ದಾರೆ. ಸ್ವದೇಶ್, ಲಗಾನ್, ಜೋಧಾ ಅಕ್ಬರ್‌ನಂತಹ ಚಿತ್ರಗಳಿಗೆ ಅಷ್ಟೇ ಏಕೆ ಮೌಲಿನ್ ರೋಜ್ ಎಂಬ ಇಂಗ್ಲೀಷ್ ಓಪೆರಾಗೂ ರೆಹಮಾನ್ ಸಂಗೀತ ನೀಡಿದ್ದಾರೆ. ನಮ್ಮಶೇಖರ ಕಪೂರ್ ಎಲಿಜಾಬೆತ್ ಚಿತ್ರ ನಿರ್ದೇಶಿಸಿದ್ದಾರೆ. ಅಮೀರ್ ಖಾನ್ ತಾರೆ ಜಮೀನ್ ಪರ್, ಶಾರುಖ್ ಚಕ್ ದೆ ಇಂಡಿಯಾ ಮಾಡಿದ್ದಾರೆ. ಮರಾಠಿ, ಬೆಂಗಾಲಿಗಳಲ್ಲಿ ಅತ್ಯುತ್ತಮ, ವಿಶ್ವದರ್ಜೆಯ ಚಿತ್ರಗಳು ಬಂದಿವೆ, ಆದರೆ ಅವಕ್ಕೆಲ್ಲ ಆಸ್ಕರ್ ಆಗಲಿ, ಗೋಲ್ಡನ್ ಗ್ಲೋಬ್ ಆಗಲಿ ದೊರಕಿಲ್ಲ. ಯಾಕೆ ? ಏಕೆಂದರೆ ಅವೆಲ್ಲ ಭಾರತೀಯರ ಚಿತ್ರಗಳು, ಆದರೆ ಸ್ಲಂ ಡಾಗ್ ವಿದೇಶಿಯರು ನಿರ್ಮಿಸಿ, ನಿರ್ದೇಶಿಸಿದ ಚಿತ್ರ.
fread full artical at http://saangatya.wordpress.com
No comments:
Post a Comment