ಪರ ಸಂಗದ ಪರಿಣಾಮಗಳ ಬಗ್ಗೆ ಎಚ್ಚರಿಸುವ ಚಿತ್ರವಿದು. ನಾಯಕ ಆಂಟೋನ್, ಪತ್ನಿ ಕ್ರಿಸ್ಟೀನ್‌ಳೊಂದಿಗೆ ಪುಟ್ಟ ಪಟ್ಟಣದ ವಾಸಿ. ಹೂವಿನ ವ್ಯಾಪಾರದ ಆಂಟೋನ್‌ಗೆ ಜೀವನದ ಬಗ್ಗೆ, ಹುಡುಗಿಯರ ಬಗ್ಗೆ ವಿಚಿತ್ರ ಆಕರ್ಷಣೆ. ಕಾಮ ಮಧುರ ಎನ್ನುವ ಖಯಾಲಿಯವ. ಇಂತಿಪ್ಪ ಆಂಟೋನ್ ಜಪಾನಿ ಹುಡುಗಿಯೊಬ್ಬಳ ಸಂಗ ಮಾಡುತ್ತಾನೆ.
ಇತ್ತ ಪತ್ನಿ ಕ್ರಿಸ್ಟೀನ್ ಗರ್ಭಿಣಿಯಾದರೆ ಅತ್ತ ಆಂಟೋನ್‌ಗೆ ಜಪಾನಿ ಭಾಷೆ ಸಾಂಗತ್ಯ. ಪುಟ್ಟ ಕಣ್ಣುಗಳ ಸುಂದರಿ ಕೊಯ್ಕೊಳೊಂದಿಗೆ ಊಟ, ಉಪಹಾರ, ನಿದ್ದೆ. ಕೊನೆಗೊಂದು ದಿನ ಕ್ರಿಸ್ಟೀನ್‌ಗೆ ಆಂಟೋನ್ ಸಂಬಂಧ ತಿಳಿಯುವ ದೃಶ್ಯ ಕುತೂಹಲಕಾರಿ. ಕೊಯ್ಕೊ ಜಪಾನಿ ಸಂಪ್ರದಾಯದಂತೆ ಹೂವುಗಳಲ್ಲಿ ಬರೆದಿಟ್ಟ ಪ್ರೇಮ ಪತ್ರ ಆಂಟೋನ್‌ಗೆ ಕಳುಹಿಸಿರುತ್ತಾಳೆ. ಆದರೆ ಹೂವಿನಲ್ಲಿ ಪ್ರೇಮ ಪತ್ರವಿರುವುದು ಆಂಟೋನ್‌ಗೆ ಗೊತ್ತಿಲ್ಲ. ಮನೆಯಲ್ಲಿ ಹೂಗುಚ್ಛದಲ್ಲಿ ತಂದಿಟ್ಟ ಹೂಗಳು ಒಂದು ದಿನ ಅರಳುತ್ತವೆ. ಆಂಟೋನ್ ಮನೆಯಲ್ಲಿರದ ಸಮಯದಲ್ಲಿ ಕುತೂಹಲದಿಂದ ಹೂವಿನೆಡೆ ಸಾಗುವ ಕ್ರಿಸ್ಟೀನ್ ಪ್ರೇಮ ಪತ್ರ ಕಾಣುತ್ತಾಳೆ.
ನಂತರ ಮನೆ ಬಿಟ್ಟು ಹೋಗುವ ಆಂಟೋನ್ ಜಪಾನಿ ಭಾಷೆಯ ಉನ್ನತಾಭ್ಯಾಸದಲ್ಲಿ ತೊಡಗುತ್ತಾನೆ. ಆದರೆ ಈ ಬದಲಾವಣೆಗಳನ್ನೆಲ್ಲ ನಿರ್ದೇಶಕ ನಾಲ್ಕು ದೃಶ್ಯಗಳಲ್ಲಿ ತೆರೆದಿಟ್ಟಿದ್ದಾರೆ. ಸೋಮವಾರದಿಂದ ಶನಿವಾರದವರೆಗೆ ಜಪಾನಿ ಸಂಪ್ರದಾಯದ ಪ್ರಕಾರ ಊಟಕ್ಕೆ ಕುಳಿತಾಗ ಫ್ರೆಂಚ್ ಸಂಪ್ರದಾಯದ ಆಂಟೋನ್ ಅನುಭವಿಸುವ ಯಾತನೆ ಜಪಾನಿ ಪ್ರೇಮದ ತಾತ್ಸಾರಕ್ಕೆ ಕಾರಣವಾಗುತ್ತದೆ. ಕೊನೆಗೆ ತನಗೆ ಜಪಾನಿ ಸಂಸ್ಕೃತಿ, ಹುಡುಗಿ ಒಪ್ಪದು ಎಂದು ನಿರ್ಧರಿಸಿದ ಆಂಟೋನ್ ಮನೆಗೆ ವಾಪಸ್ಸಾಗುತ್ತಾನೆ.
ಚಿಕ್ಕ ಕತೆಯೊಂದನ್ನು ಸಮರ್ಥವಾಗಿ ಹೇಗೆ ಬಿಂಬಿಸಬಹುದು ಎಂಬುದಕ್ಕೆ ಈ ಚಿತ್ರ ಉದಾಹರಣೆ. ಎರಡು ಸಂಸ್ಕೃತಿಗಳ ಸಮ್ಮಿಲನವೂ ಎಷ್ಟು ಕಷ್ಟಕರ ಎಂಬುದು ಕೂಡ ಇಲ್ಲಿ ಬಿಂಬಿತವಾಗುತ್ತದೆ. ನಿರ್ದೇಶಕ ಕಟ್ಟಿ ಕೊಡುವ ಕೆಲ ದೃಶ್ಯಗಳಲ್ಲಿ ಪರ ಸಂಗದ ಪರಿಣಾಮ, ಶುಭ್ರ ಪ್ರೀತಿಯ ಅನುಭವ ನಮ್ಮದಾಗುತ್ತದೆ. ಅಂದ ಹಾಗೆ ಫ್ರೆಂಚ್ ಭಾಷೆಯಲ್ಲಿ ಡೊಮಿಸೈಲ್ ಕೊಂಜುಗಲ್ ಹೆಸರಿನ ಈ ಚಿತ್ರ ಇಂಗ್ಲೀಷ್ ಅವತರಣಿಕೆಯಲ್ಲಿ ಬೆಡ್ ಆಂಡ್ ಬೋರ್ಡ್ ಆಗಿದೆ. ನಿರ್ದೇಶಕ ಫ್ರಾನ್ಸಿಸ್ ಟ್ರಾಫ್ಯಾಟ್. ಜೀನ್ ಪಿಯರ್, ಕ್ಲೌಡಾ ಜೇಡ್ ಮುಖ್ಯ ಪಾತ್ರಧಾರಿಗಳು. ಚಿತ್ರ ಬಿಡುಗಡಗೊಂಡ ವರ್ಷ ೧೯೭೦.

2 comments:
ಬರಹ ತುಂಬ ಚೆಂದ ಇದೆ ರವಿ.. keep going..
ನಾವು ಸಿನಿಮಾ ನೋಡದಿದ್ದರೂ, ನಿಮ್ಮ ಬರಹದ ಮೂಲಕ ತಿಳಿದುಕೊಳ್ಳುತ್ತೇವೆ. ವಂದನೆಗಳು ಸರ್..
-ಚಿತ್ರಾ
Post a Comment