ಖ್ಯಾತ ನಟ, ನಿರ್ದೇಶಕ ಕಮಲ ಹಾಸನ್ ಹೊಸ ಸಾಹಸಗಳಿಗೆ ಹೆಸರುವಾಸಿ. ಅವರು ನಿರ್ದೇಶಿಸಿದ, ನಿರ್ಮಿಸಿದ ಅಥವಾ ನಟಿಸಿದ ಚಿತ್ರಗಳಲ್ಲಿ ಹೊಸದೇನಾದರೂ ಇದ್ದೇ ಇರುತ್ತದೆ. ಅಭಯ್, ದಶಾವತಾರಂ, ಇಂಡಿಯನ್ ಇಂತಹ ಸಾಹಸಗಳಿಗೆ ಉದಾಹರಣೆ. ಟಿವಿ ಚಾನೆಲ್ಗಳಲ್ಲಿ ಬಳಸುವ ಜೆ-೧೧ ಕೆಮೆರಾ ಬಳಸಿ ಚಿತ್ರವೊಂದನ್ನು ನಿರ್ಮಿಸುತ್ತೇನೆ ಎಂದು ಸವಾಲ್ ಹಾಕಿದ್ದರಂತೆ ಕಮಲ್. ಈ ಸಾಹಸಕ್ಕಾಗಿ ಅವರು ಆಯ್ದುಕೊಂಡಿದ್ದು ಮುಂಬೈ ಎಕ್ಸ್ಪ್ರೆಸ್ ಚಿತ್ರ. ಜೆ-೧೧ ಕೆಮೆರಾ ಮೂಲಕ ಇಡೀ ಚಿತ್ರ ಹಿಡಿದಿಟ್ಟ ಅವರು ನಂತರ ಡಿಜಿಟಲ್ ತಂತ್ರಜ್ಞಾನವನ್ನು ಫಿಲ್ಮ್ ತಂತ್ರಜ್ಞಾನಕ್ಕೆ ಬದಲಾಯಿಸಿದರು. ಈ ಪ್ರಯತ್ನ ಭಾರಿ ಯಶಸ್ಸು ನೀಡಲಿಲ್ಲವಾದರೂ ಇದು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಂತೂ ಸತ್ಯ.
ನಾನು ಎಸ್ಸೆಸ್ಸೆಲ್ಸಿ ಫೇಲ್ ಆಗಿ ಹರಸಾಹಸ ಪಟ್ಟು ಬಿಕಾಂ, ಜರ್ನಲಿಸ್ಂ ಡಿಪ್ಲೋಮಾ ಮಾಡಿ ಪತ್ರಿಕೋದ್ಯಮದ ಪಾಲಾದೆ. ಕಳೆದ ೯ ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದೇನೆ, ೭ ವರ್ಷಗಳಿಂದ ವಿಜಯ ಕರ್ನಾಟಕದ ಬಾಗಲಕೋಟ ಅವೃತ್ತಿಯಲ್ಲಿ ಉಪಸಂಪಾದಕ, ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಸದ್ಯ ಹಿರಿಯ ವರದಿಗಾರ. ಸಿನಿಮಾ ಅಂದರೆ ನನಗೆ ಊಟ, ನಿದ್ದೆಯಷ್ಟೇ ಪ್ರೀತಿ
2 comments:
ರವಿರಾಜ್, ನಿಮ್ಮ ರಿಪೋರ್ಟ್ಸ್ ನೋಡುತ್ತಿದ್ದೇನೆ. ಅತ್ಯುತ್ತಮ ಕೆಲಸ ಮಾಡುತ್ತೀದ್ದೀರಿ.ಮುಂದುವರೆಯಲಿ....
dhanyavada sughosh, nimma sadashayagalirali
Post a Comment